About DSF

ದೇಶಪಾoಡೆ ಎಜುಕೇಶನ್ ಟ್ರಸ್ಟ್ ಇದರಿಂದ ಹೊಸದಾಗಿ ದೇಶಪಾoಡೆ ಸುಸಂಧಿ ಫೆಲೋಶಿಪ್ ಎನ್ನುವ ಪ್ರೊಗ್ರಾಮ್ ಪ್ರಾರಂಭವಾಗಿದೆ ಇದರಿಂದ ಗ್ರಾಮೀಣ ವಿದ್ಯಾರ್ತಿಗಳಿಗೆ ಉಪಯೋಗವಾಗುವದು. ಇದರ ಮೂಲಕ ಉದ್ಯಮಶೀಲತೆ, ಪರಿಣಾಮಕಾರಿ ಸಂವಹನ ಕೌಶಲ್ಯ, ತಂತ್ರಜ್ಞಾನ, ಮಾರುಕಟ್ಟೆ ನಿರ್ವಹಣೆ, ಜೀವನ ಕೌಶಲ್ಯಗಳು, ಹಣಕಾಸು ವ್ಯವಹಾರ, ನಾಯಕತ್ವ ಗುಣ ವೃದ್ದಿ, ಪ್ರಾಥಮಿಕ ಇಂಗ್ಲೀಷ ಜ್ಞಾನ, ಇತ್ಯಾದಿಗಳನ್ನು ಕಲಿಸಲಾಗುವದು.

ಇವಾಗ ಮೊದಲನೇ ಬ್ಯಾಚ್ ಪ್ರಾರಂಭವಾಗಿದ್ದು ಅದರಲ್ಲಿ ಇಪ್ಪತ್ತು ವಿದ್ಯಾರ್ತಿಗಳು ಅಬ್ಯಾಸ ಮಾಡುತ್ತಿದ್ದೇವೆ.ಇದು ಕೇವಲ ಪ್ರಾರಂಭವಾಗಿ ೧೫ ದಿನಗಳಾಯಿತು.ನಾವು ಮೊದಲು ಯಾವುದೇ ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿರಲಿಲ್ಲ ಇದನ್ನು ಸೇರಿದ ನಂತರ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಮೊದಲನೆಯದಾಗಿ ಜನೆವರಿ ೨೬ರ ಗಣರಾಜ್ಯೋತ್ಸವ ದಿನದಂದು ಎಲ್ಲ ವಿದ್ಯಾರ್ತಿಗಳು ಆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೆರಿಸಿದೆವು.

ನಾವು ಜನೆವರಿ ೨೭ ರಿಂದ ೨೯ ರವರೆಗೆ ನಡೆದ ಸದವಕಾಶಗಳ ಸದುಪಯೋಗ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ನಮ್ಮದಾಗಿತ್ತು. ಇದರಲ್ಲಿ ಗುರುರಾಜ ದೇಶಪಾಂಡೆ, ಧರ್ಮಸ್ತಲದ ಧರ್ಮಾದಿಕಾರಿಯದ ಶ್ರೀ ಮಾನ್ ವೀರೇಂದ್ರ ಹೆಗ್ಡೆ, ಹಿಂದಿ ಚಲನಚಿತ್ರ ನಿರ್ಮಾಪಕ ರಾಹುಲ ಭೋಸ್, ಇನ್ನೂ ಅನೇಕ ಗಣ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಾವುಗಳು ನಮ್ಮದೇವಂದು ಶಾಪ್ ತೆರೆದು ಇದರಿಂದ ಆ ಕಾರ್ಯಕ್ರಮಕ್ಕೆ ಬಂದ ಗಣ್ಯರಿಗೆ ತಂಪಾದ ಮಜ್ಜಿಗೆ ಮತ್ತು ಲಸ್ಸಿ ವಿತರಿಸಿದೆವು.ಇದನ್ನು ನಾವು ಭಾರತೀಯ ಮಾದರಿಯಲ್ಲಿ ಅದು ಗ್ರಾಮೀಣ ಪದ್ದತಿಯಲ್ಲಿ ಮಡಕಿಯನ್ನು ಬಳಸಿ ಅದನ್ನು ವೆಂದು ಮರಳಿನ ಚೀಲದಲ್ಲಿ ಅದರ ಸುತ್ತಲು ನೀರು ಹಾಕಿ ತಂಪಾಗಿರುವಂತೆ ಮಾಡಿದ್ದೆವು. ಈ ತರಹದ ನೈಸರ್ಗಿಕ ಮಾದರಿಯಲ್ಲಿ ಮಾಡುವದರಿಂದ ಯಾವುದೇ ದುಸ್ಪರಿನಾಮಗಳು ಆಗುವದಿಲ್ಲ.ಇದಕ್ಕೆ ಮೊರುದಿನಕ್ಕೆ ತಗುಲಿದ ವೆಚ್ಹ ೧೮೧೬ ರೋಗಳು ಇದರಿಂದ ನಮಗೆ ೯೩೦ ರೋಗಳು ಲಾಭವಾಯಿತು.



0 comments:

Post a Comment